ಕೊಚ್ಚಿ: ಭೀಕರ ರಸ್ತೆ ಅಪಘಾತ: ಮಲಯಾಳಂ ನಟ ಮೃತ್ಯು, ಮೂವರು ಕಲಾವಿದರಿಗೆ ಗಾಯ
ಕೊಚ್ಚಿ: ಭೀಕರ ರಸ್ತೆ ಅಪಘಾತ ಸಂಭವಿಸಿ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟರೊಬ್ಬರು ಮೃತಪಟ್ಟು, ಇತರ ಮೂವರು ಕಲಾವಿದರು ಗಾಯಗೊಂಡಿರುವ ಘಟನೆ ಸೋಮವಾರ (ಜೂ.5 ರಂದು) ನಸುಕಿನ ವೇಳೆ ಕೇರಳದ ಕೈಪಮಂಗಲಂನಲ್ಲಿ ನಡೆದಿರುವುದು ವರದಿಯಾಗಿದೆ.
ಮಾಲಿವುಡ್ ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಕೊಲ್ಲಂ ಸುಧಿ (39) ಮೃತ ನಟ. ಇದರೊಂದಿಗೆ ಮಿಮಿಕ್ರಿ ಕಲಾವಿದರಾದ ಬಿನು ಆದಿಮಾಲು, ಉಲ್ಲಾಸ್ ಮತ್ತು ಮಹೇಶ್ ಘಟನೆಯಲ್ಲಿ ಗಾಯಗೊಂಡಿದ್ದಾರೆ.




