ಓವರ್ ಟೇಕ್ ಮಾಡುವ ವೇಳೆ ಸರ್ಕಾರಿ ಬಸ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೆ ಸಾವು
ಗದಗ: ಓವರ್ ಟೇಕ್ ಮಾಡುವ ವೇಳೆ ಸರ್ಕಾರಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಬೈಕ್ ಸವಾರ ಬ್ಯಾಲವಾಡಗಿ ನಿವಾಸಿ ಮಂಜುನಾಥ ಬಂಡಿಯವರ್ (44) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಂಜುನಾಥ ಮುಂಡರಗಿನಲ್ಲಿ ಚಿಕನ್ ವ್ಯಾಪಾರಿಯಾಗಿದ್ದರು.
ಕೆಇಬಿ ಬಳಿ ನೀರು ತುಂಬಿಕೊಂಡು ಅಂಗಡಿ ಕಡೆಗೆ ಹೊರಟಿದ್ದ ಸಂದರ್ಭ ಅದೇ ಮಾರ್ಗವಾಗಿ ಶಿರಹಟ್ಟಿಗೆ ಸರ್ಕಾರಿ ಬಸ್ ಹೊರಟಿತ್ತು. ಬಸ್ ಓವರ್ ಟೇಕ್ ಮಾಡುವ ವೇಳೆ ಬಸ್‌ಗೆ ಟಚ್ ಆಗಿ ಹಿಂಬದಿ ಚಕ್ರದಡಿ ಬಿದ್ದಿದ್ದಾರೆ.
ಬಸ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ




