ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದಾಗಿ ಘೋಷಿಸಿದ ಪ್ರತಿಭಟನಾ ನಿರತ ಕುಸ್ತಿಪಟುಗಳು

ನವ ದೆಹಲಿ: ಅಪ್ರಾಪ್ತ ವಯಸ್ಕ ಸೇರಿದಂತೆ ಹಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಹಾಗೂ ದೇಶದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಇಂದು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಹೇಳಿದ್ದಾರೆ.
38 ದಿನಗಳ ಕಾಲ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿ ಇದೀಗ ಕುಸ್ತಿಪಟುಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಿನೇಶ್ ಫೋಗಟ್ ಅವರು ಟ್ವಿಟರ್‌ನಲ್ಲಿ ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಘೋಷಣೆ ಮಾಡಿದ್ದಾರೆ. ವಿನೇಶ್ ಫೋಗಟ್ ಟ್ವೀಟ್ ಮಾಡಿ, ‘ಕುಸ್ತಿಪಟುಗಳು ತಮ್ಮ ಒಲಿಂಪಿಕ್ ಪದಕಗಳನ್ನು ಗಂಗಾನದಿಯಲ್ಲಿ ಮುಳುಗಿಸುತ್ತಾರೆ’ ಎಂದು ಬರೆದಿದ್ದಾರೆ.
ಇದಲ್ಲದೆ ಕುಸ್ತಿಪಟು ಬಜರಂಗ್ ಪುನಿಯಾ ಸಾಕ್ಷಿ ಮಲಿಕ್ ಕೂಡ ಈ ಮಾಹಿತಿಯನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದು, ‘ನಾವು ಈ ಪದಕವನ್ನು ಗಂಗೆಯಲ್ಲಿ ಎಸೆಯುತ್ತೇವೆ. ಏಕೆಂದರೆ, ಗಂಗಾ ತಾಯಿ ನಾವು ಗಂಗೆಯನ್ನು ನಮ್ಮಂತೆಯೇ ಪವಿತ್ರವೆಂದು ಪರಿಗಣಿಸುತ್ತೇವೆ. ನಾವು ಈ ಪದಕವನ್ನು ಶ್ರಮಿಸಿ ಪಡೆದಿದ್ದೇವೆ’ ಎಂದಿದ್ದಾರೆ.
ಇದರೊಂದಿಗೆ ಇಂದಿನಿಂದ ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ನಡೆಸುವುದಾಗಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಘೋಷಿಸಿದ್ದಾರೆ.