September 20, 2024

ಪುತ್ತೂರು: ಅನ್ಯಧರ್ಮದ ಯುವತಿ ಮಾತನಾಡಿದ ವಿಚಾರ: ಯುವಕನಿಗೆ ಮಾರಣಾಂತಿಕ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

0

ಪುತ್ತೂರು:  ಅನ್ಯ ಧರ್ಮದ ಯುವತಿಯೊಂದಿಗೆ ಇದ್ದ ಮುಸ್ಲಿಂ ಯುವಕನೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಕೃತಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮರೀಲ್ ಕಾಡುಮನೆ ನಿವಾಸಿ ಮಹಮ್ಮದ್ ಫಾರಿಶ್ (18) ಹಲ್ಲೆಗೊಳಗಾದ ವಿದ್ಯಾರ್ಥಿ.

ಘಟನೆ ವಿವರ
ಹಲ್ಲೆಗೊಳಗಾದ ಯುವಕ ಹಾಗೂ ಆತನ ಜೊತೆಗಿದ್ದ ಯುವತಿ ಇಬ್ಬರೂ ವಿದ್ಯಾರ್ಥಿಗಳು. ಇಬ್ಬರೂ ನಗರದ ಮಾಲ್‌ವೊಂದರ ಚಿತ್ರಮಂದಿರದಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಿಸಿ ಜ್ಯೂಸ್ ಕುಡಿಯಲು ಜೊತೆಯಲ್ಲೇ ಹೋಗಿದ್ದರು.

ಆಗ, ಅಲ್ಲಿಗೆ ಬಂದ ಯುವಕರ ತಂಡವೊಂದು ಮಹಮ್ಮದ್ ಫಾರಿಶ್ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ’. ‘ಹಲ್ಲೆಗೊಳದಾಗ ಯುವಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆ ನಡೆಸಿದ ಮೂವರ ಸುಳಿವು ಸಿಕ್ಕಿದ್ದು, ಪ್ರದೀಪ್‌ ಎಂಬಾತನನ್ನು ಬಂಧಿಸಿದ್ದಾರೆ. ಉಳಿದವರ ಸುಳಿವು ಸಿಕ್ಕಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್‌ ಇನ್‌ಸ್ಪೆಕ್ಟರ್ ಸುನಿಲ್‌ ಕುಮಾರ್ ಹಾಗೂ ಪಿಎಸ್‌ಐ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!