March 16, 2026

ದಿವಾಳಿಯತ್ತ ಗೋ ಫಸ್ಟ್ ವಿಮಾನಯಾನ ಸಂಸ್ಥೆ: ಎಲ್ಲಾ ಸೇವೆಗಳು ಸ್ಥಗಿತ

0
Go-First-660x330.jpg

ಹೊಸದಿಲ್ಲಿ: ವಾಡಿಯಾ ಸಮೂಹದ ಒಡೆತನದ ‘ಗೋ ಫಸ್ಟ್’ ವಿಮಾನಯಾನ ಕಂಪನಿಯು, ತನ್ನ ವಿಮಾನ ಸೇವೆಗಳನ್ನು ಬುಧವಾರ ಮತ್ತು ಗುರುವಾರಕ್ಕೆ ಅನ್ವಯಿಸುವಂತೆ ಅಮಾನತುಗೊಳಿಸಿದೆ. ಹಣಕಾಸಿನ ತೀವ್ರ ಬಿಕ್ಕಟ್ಟಿನ ನಡುವೆ ಕಂಪನಿ ಈ ತೀರ್ಮಾನ ಕೈಗೊಂಡಿದೆ.

ವಾಡಿಯಾ ಗ್ರೂಪ್‌ ಮಾಲೀಕತ್ವದ ಗೋ ಫ‌ಸ್ಟ್‌ ವಿಮಾನಯಾನ ಕಂಪನಿ ದಿವಾಳಿಯಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ದಾಖಲೆಗಳನ್ನು ಸಲ್ಲಿಸಿದೆ.

ತನಗೆ ಹಣಕಾಸಿನ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸ್ವಯಂಪ್ರೇರಿತವಾಗಿ ತಿಳಿಸಿದೆ. ಕಂಪನಿಯ ಮುಖ್ಯಸ್ಥ ಕೌಶಿಕ್ ಖೋನಾ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.

ದೇಶದ ವಿಮಾನಯಾನ ಕ್ಷೇತ್ರದ ಖಾಸಗಿ ಕಂಪನಿ ಬಾಗಿಲು ಮುಚ್ಚುವ ಹಂತ ಪ್ರವೇಶಿಸಿದೆ. ಬಿಕ್ಕಟ್ಟು ಎದುರಿಸುತ್ತಿರುವಂತೆಯೇ ಮೇ 3 ಮತ್ತು ಮೇ 5ರಂದು ವಿಮಾನಯಾನಗಳನ್ನು ರದ್ದು ಮಾಡಿದೆ.

ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಂಪನಿ ಆಡಳಿತ ಮಂಡಳಿಗೆ ನೋಟಿಸ್‌ ಜಾರಿಯಾಗಿದ್ದು, ವಿಮಾನಗಳನ್ನು ರದ್ದು ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ಕಂಪನಿ ನ್ಯಾಯಮಂಡಳಿಯಲ್ಲಿ ಜೆಟ್‌ ಏರ್‌ವೆಸ್‌ ದಿವಾಳಿ ಘೋಷಣೆ ಮಾಡಿದ ಅದೇ ಪ್ರಕ್ರಿಯೆ ಅನುಸರಿಸುತ್ತಿರುವ ದೇಶದ 2ನೇ ವಿಮಾನಯಾನ ಸಂಸ್ಥೆ ಗೋ ಫ‌ಸ್ಟ್‌ ಏರ್‌ ಆಗಿದೆ.

Leave a Reply

Your email address will not be published. Required fields are marked *

error: Content is protected !!