ಉಳ್ಳಾಲದಲ್ಲಿ ತಾನೊಬ್ಬ ಗೆದ್ದು ಉಳಿದ ಎರಡು ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕೆನ್ನುವುದೇ ಯು.ಟಿ ಖಾದರ್ ಉದ್ದೇಶ: ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್
ಮಂಗಳೂರು: ಉಳ್ಳಾಲದಲ್ಲಿ ತಾನೊಬ್ಬ ಗೆದ್ದು ಉಳಿದ ಎರಡು ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕು ಅನ್ನುವುದು ಯು.ಟಿ ಖಾದರ್ ಮನೋಭಾವ. ಇದರಿಂದ ತಾನೊಬ್ಬ ಮಂತ್ರಿಯಾಗುವ ಅವಕಾಶ ಸಿಗುವ ಉದ್ದೇಶ ಮಾತ್ರ ಖಾದರ್ ಅವರಿಗೆ ಇದೆ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಪಂಡಿತ್ ಹೌಸ್ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಮಂಗಳೂರು ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಎರಡು ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿಗೆ ಧಕ್ಕಿರುವಂತಹ ಏಕೈಕ ಕ್ಷೇತ್ರ ಉಳ್ಳಾಲ.
ಶಾಸಕ ಯು.ಟಿ ಖಾದರ್ ಬಯಸುವುದು ಕೂಡಾ ಇದನ್ನೇ. ಯು.ಟಿ ಖಾದರ್ ಮನೋಭಾವ ಎಂದರೆ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಬೇಕು, ನಾನೊಬ್ಬ ಗೆದ್ದು ಹೊಸ ಸರಕಾರದಲ್ಲಿ ಮಂತ್ರಿಯಾಗಬೇಕು ಅನ್ನುವುದೇ ಖಾದರ್ ಗುರಿ.
ಹಿಂದೂಗಳಿಗೆ ಅನ್ಯಾಯವಾದಾಗ ಬಿಜೆಪಿ ಬೀದಿಗಿಳಿದು ಹೋರಾಡಿರುವುದನ್ನು ಗಮನಿಸಿದ್ದೇವೆ.
ಆದರೆ ಅಲ್ಪಸಂಖ್ಯಾತರ ಪಕ್ಷ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಹಾಗೂ ಯು.ಟಿ ಖಾದರ್ ಅವರಿಂದ ಓಟು ಪಡೆದು ಅವರನ್ನು ಓಟು ಪಡೆಯುವ ಯಂತ್ರಗಳ ಹಾಗೆ ನೋಡುತ್ತಿದ್ದಾರೆ ಹೊರತು ಅವರ ಸಮುದಾಯದವರಿಗೆ ಅನ್ಯಾಯವಾದಾಗ ಕಣ್ಣೀರು ಒರೆಸುವಂತೆ ನಾಟಕವಾಡಿ ಕೇವಲ ಸುದ್ಧಿಗೋಷ್ಠಿ ಒಂದನ್ನು ನಡೆಸಿ ತಣ್ಣೀರು ಎರಚುವ ಕೆಲಸ ಮಾಡಿದ್ದಾರೆ ಎಂದು ದೂರಿದರು.




