ಬೈಜೂಸ್ ಸಂಸ್ಥೆಯ ಸಿಇಒ ಬೈಜು ರವೀಂದ್ರನ್ ಕಚೇರಿ ಮತ್ತು ಮನೆಯ ಮೇಲೆ ಇ.ಡಿ ದಾಳಿ
ಬೆಂಗಳೂರು: ಬೈಜೂಸ್‌ನ ಸಿಇಒ ಬೈಜು ರವೀಂದ್ರನ್‌ರ ಬೆಂಗಳೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು ಶೋಧ ಕಾರ್ಯಚರಣೆಯನ್ನು ನಡೆಸಲಾಗಿದೆ.
ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಬೈಜೂಸ್ ಸಿಇಒ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾರಿ ನಿರ್ದೇಶನಾಲಯ (ಇಡಿ) ಕೆಲವು ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಕೇಂದ್ರ ಸಂಸ್ಥೆ ತಿಳಿಸಿದೆ. ಖಾಸಗಿ ವ್ಯಕ್ತಿಗಳಿಂದ ಹಲವಾರು ದೂರುಗಳು ಬಂದ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದೂ ಕೇಂದ್ರ ಸಂಸ್ಥೆಯು ಹೇಳಿದೆ. ಇನ್ನು ಬೈಜು ರವೀಂದ್ರನ್‌ರಿಗೆ ಇಡಿ ಹಲವಾರು ಬಾರಿ ಸಮನ್ಸ್ ನೀಡಿದೆ, ಆದರೆ ರವೀಂದ್ರನ್ ಇಡಿ ಮುಂದೆ ಹಾಜರಾಗಿಲ್ಲ ಎಂದು ಆರೋಪ ಮಾಡಲಾಗಿದೆ.




