February 3, 2026

ಕಾಂಗ್ರೆಸ್ ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆ

0
sv5ih6kg_anil-antony-joins-bjp-pti-650-_650x400_06_April_23.jpg

ಹೊಸದಿಲ್ಲಿ: ಕಾಂಗ್ರೆಸ್ ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಸಾಕ್ಷ್ಯಚಿತ್ರ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದ ಅನಿಲ್‌ ಆ್ಯಂಟನಿ, ಭಾರತದ ಸಂಸ್ಥೆಗಳಿಗಿಂತ ಬಿಬಿಸಿ ಸಂಸ್ಥೆಯನ್ನು ಶ್ರೇಷ್ಠ ಎಂದು ತಿಳಿಯುವುದು ಅಪಾಯಕಾರಿ ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೇ, ಅದನ್ನು ಡಿಲೀಟ್‌ ಮಾಡುವಂತೆ ಕಾಂಗ್ರೆಸ್‌ ಅನಿಲ್‌ ಆ್ಯಂಟನಿ ಅವರನ್ನು ಒತ್ತಾಯಿಸಿತ್ತು ಎನ್ನಲಾಗಿದೆ. ಇದರಿಂದ ಸಿಡಿದೆದ್ದಿರುವ ಅನಿಲ್‌ ಆ್ಯಂಟನಿ, ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಕೇರಳ ಕಾಂಗ್ರೆಸ್‌ ಘಟಕದ ವಿವಿಧ ಹುದ್ದೆಗಳಿಗೂ ಅನಿಲ್‌ ಆ್ಯಂಟನಿ ರಾಜೀನಾಮೆ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಕ್ಷಣವನ್ನು ಬಿಜೆಪಿ ಹಂಚಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!