February 3, 2026

ವಿಟ್ಲ: ವಿಧಾನ ಸಭಾ ಚುನಾವಣೆ ಹಿನ್ನೆಲೆ ಹೆಚ್ಚಿದ ತಪಾಸಣೆ: ಕೇರಳ ಗಡಿಭಾಗದಲ್ಲಿ ಅಧಿಕಾರಿಗಳಿಂದ ಪರಿಶೀಲನೆ

0
IMG-20230406-WA0021.jpg

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿಭಾಗದಲ್ಲಿ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ. ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ, ಕನ್ಯಾನ, ಆನೆಕಲ್ಲು, ಮೊದಲಾದ ಕಡೆಗಳಿಗೆ ಜಂಟಿಯಾಗಿ ಸಿಬ್ಬಂದಿಗಳ ಜತೆ ಭೇಟಿ, ಪರಿಶೀಲನೆ ನಡೆಸಿದ್ದು, ಕರ್ನಾಟಕ-ಕೇರಳ ಭಾಗದಲ್ಲಿ ಬಿಗೀ ಬಂದೋ ಬಸ್ತ್ ಏರ್ಪಡಿಸಿ, ತಪಾಸಣೆ ಕಾರ್ಯ ಬಿಗಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿಟ್ಲ ಠಾಣಾ ವ್ಯಾಪ್ತಿ ಪುತ್ತೂರು ಮತ್ತು ಬಂಟ್ವಾಳ ಎರಡು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೇರಳ ಗಡಿ ಭಾಗ ಇರುವುದರಿಂದ ಹೆಚ್ಚಿ ತಪಾಸಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!