February 2, 2026

ಮಂಗಳೂರು: ನಿಷೇಧಿತ ಇ-ಸಿಗರೇಟ್‌, ವಿದೇಶಿ ಸಿಗರೇಟ್‌ ಮಾರಾಟ: ಐದು ಮಂದಿಯ ಬಂಧನ

0
IMG-20230330-WA0025.jpg

ಮಂಗಳೂರು: ಲಾಲ್‌ಭಾಗ್‌ನ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ನಿಷೇಧಿತ ಇ-ಸಿಗರೇಟ್‌ ಮತ್ತು ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐದು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ರೆಹಮತ್ತುಲ್ಲಾ, ಸಂತೋಷ, ಶಿವು ಯಾನೆ ಶಿವಾನಂದ, ಹಸನ್ ಶರೀಫ್, ಇರ್ಷಾದ್ ಎಂದು ಗುರುತಿಸಲಾಗಿದೆ.

ಇ-ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳ ಮೇಲೆ ದಾಳಿ ಒಟ್ಟು 1,50,000 ಮೌಲ್ಯದ 273 ಇ-ಸಿಗರೇಟ್ ಗಳನ್ನು ಹಾಗೂ ಕೊಟ್ಟಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಒಟ್ಟು 5,30,000 ಮೌಲ್ಯದ ಎಚ್ಚರಿಕೆಯ ಚಿಹ್ನೆಯನ್ನು ಅಳವಡಿಸದ ವಿವಿಧ ವಿದೇಶಿ ಕಂಪನಿಗಳ ಸಿಗರೇಟ್ ತುಂಬಿಸ್ರುವ ಪ್ಯಾಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಸ್ವಾಧೀನಪಡಿಸಿಕೊಂಡ ಇ-ಸಿಗರೇಟ್‌ ಮತ್ತು ವಿದೇಶಿ ಸಿಗರೇಟ್‌ ಗಳ ಒಟ್ಟು ಮೊತ್ತ 6,80,000 ಆಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ 2019 ಹಾಗೂ ಕೊಟ್ಟಾ ಕಾಯ್ದೆಯದೇ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!