February 2, 2026

ಕಡಬ: ಟ್ಯೂಷನ್ ಗೆ ತೆರಳಿದ ಶಾಲಾ ಬಾಲಕ ದಿಢೀರ್ ನಾಪತ್ತೆ: ಕುಮಾರಧಾರ ನದಿ ಬಳಿ ಬ್ಯಾಗ್ ಹಾಗೂ ಐಡಿ ಪತ್ತೆ?

0
image_editor_output_image-1237660331-1680160706657

ಕಡಬ: ಟ್ಯೂಷನ್ ಗೆಂದು, ಮನೆಯಿಂದ ತೆರಳಿದ್ದ ಹತ್ತನೇ ತರಗತಿಯ ಬಾಲಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ.

ಕಡಬದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಅದ್ವೈತ್ ಎಂಬಾತ ಮಾ.29ರಂದು ಟ್ಯೂಷನ್ ಗೆಂದು ತೆರಳಿದ್ದು ಬಳಿಕ ಮನೆಗೆಬಾರದೆ ನಾಪತ್ತೆಯಾಗಿದ್ದಾನೆ.

ಮನೆಯವರು ಹಾಗೂ ಊರವರು ಸೇರಿಕೊಂಡು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

ಮಾ.31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನದಿಗೆ ಹಾರಿರುವ ಸಂಶಯ ವ್ಯಕ್ತವಾಗಿದ್ದು ಖಚಿತವಾಗಿಲ್ಲ. ನದಿಯಲ್ಲಿ ಹುಡುಕಾಟ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!