February 4, 2026

ಮಂಗಳೂರು: ಚುನಾವಣೆ ಹಿನ್ನೆಲೆ ವಾಹನ ತಪಾಸಣೆ ಬಿಗಿಗೊಳಿಸಿದ ಪೊಲೀಸರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4.33 ಲಕ್ಷ ನಗದು ಹಣ ವಶಕ್ಕೆ

0
IMG-20230329-WA0032.jpg

ಮಂಗಳೂರು, ಮಾ.29: ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಪಾಸಣೆ ಬಿಗಿಗೊಳಿಸಿದ್ದು, ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4.33 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಪೊಲೀಸರು ಕಾರ್ ಸ್ಟ್ರೀಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಸಿಎಂ ಹಾಜೀಂ ಎಂಬವರ ಕಾರಿನಲ್ಲಿ 3.23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಜೀಂ ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿಯಾಗಿದ್ದು, ಹಣದ ಬಗ್ಗೆ ಕೇಳಿದಾಗ ಅದು ತನ್ನ ಮಾವ ಕೊಟ್ಟಿರುವುದು, ಮಾವ ಕಾರ್ ಸ್ಟ್ರೀಟ್ ನಲ್ಲಿ ಜುವೆಲ್ಲರಿ ಹೊಂದಿದ್ದು ಹಣವನ್ನು ಅವರ ಪತ್ನಿಗೆ ಮುಟ್ಟಿಸಲು ತೆರಳುತ್ತಿದ್ದೇನೆ ಎಂದು ಹೇಳಿದ್ದರು.

ಆದರೆ ಪೊಲೀಸರು ಅದನ್ನು ಕೇಳದೆ ಹಣವನ್ನು ವಶಕ್ಕೆ ಪಡೆದು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕದ್ರಿ ಪೊಲೀಸರು ನಂತೂರಿನಲ್ಲಿ ಕಾರು ತಪಾಸಣೆ ನಡೆಸುತ್ತಿದ್ದಾಗ 1.10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಕಾಸರಗೋಡು ಮೂಲದ ಅನಿಲ್(35) ಮತ್ತು ಶಮೀಲ್ (39) ಎಂಬವರು ಕಾರಿನಲ್ಲಿದ್ದು ನಂತೂರಿನಿಂದ ಮಲ್ಲಿಕಟ್ಟೆಯತ್ತ ತೆರಳುತ್ತಿದ್ದರು. ಹಣದ ಕಂತೆ ಇದ್ದುದರ ಬಗ್ಗೆ ಸೂಕ್ತ ದಾಖಲೆ ಹೊಂದಿಲ್ಲದ ಕಾರಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿಂದಿನ ಸೀಟಿನಲ್ಲಿರಿಸಿದ್ದ ಕಪ್ಪು ಸ್ಕೂಲ್ ಬ್ಯಾಗಿನಲ್ಲಿ ನಗದು ಹಣ ಪತ್ತೆಯಾಗಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!