May 10, 2026

ಬೆಳ್ತಂಗಡಿ: ಬೈಕ್ ಗೆ ಲಾರಿ ಢಿಕ್ಕಿ: ಸವಾರ ಮೃತ್ಯು, ಮತ್ತೋರ್ವ ಗಂಭೀರ

0
20230329_195146.jpg

ಬೆಳ್ತಂಗಡಿ: ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ‌ ನಡೆದಿದೆ.

ಬೆಳ್ತಂಗಡಿ ಸರ್ವೆ ಇಲಾಖೆಯ ಸರ್ವೆ ಇದ್ದ ಕಾರಣ ಕರ್ತವ್ಯ ಮುಗಿಸಿ ವಾಪಸ್ ಅಗಿವ ವೇಳೆ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕ್ ನಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಚೈನರ್ ಅಗಿರುವ ಪ್ರಸಾದ್ ಶೆಟ್ಟಿ(27) ಸಾವನ್ನಪ್ಪಿದ್ದು , ಸಹಸವಾರ ಸರ್ವೆಯರ್ ವಿಶ್ವನಾಥ್ ಗಂಭೀರ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!