May 10, 2026

ಸಾಲ್ಮರ: ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ, ಅಸ್ವಾಲಿಹಾ-ಫಾಳಿಲಾ ಶರೀಅತ್, ಪಿ.ಯು.ಕಾಲೇಜ್ ಪ್ರವೇಶ ಪತ್ರಿಕೆ ಬಿಡುಗಡೆ

0
IMG-20230328-WA0024.jpg

ಪುತ್ತೂರು : ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಪ್ರತಿಷ್ಠಿತ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಆಂಗ್ಲ ಮಾಧ್ಯಮ ಶಾಲೆ ಮತ್ತು ಇದೀಗ ಏಳನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು.ಕಾಲೇಜ್ ನಲ್ಲಿ 2023-24 ನೇ ಸಾಲಿನ ದಾಖಲಾತಿಗೆ ಚಾಲನೆ ನೀಡಲಾಯಿತು.

ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಅವರು ಹೊಸದಾಗಿ ದಾಖಲಾತಿ ಪಡೆಯುವ ಎಲ್.ಕೆ.ಜಿ. ಮತ್ತು ಯುಕೆಜಿ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಅಸ್ವಾಲಿಹಾ- ಫಳೀಲಾ ಶರೀಅತ್ ಮತ್ತು ಪಿ.ಯು.ವಿಭಾಗಕ್ಕೆ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯ ಪರವಾಗಿ ಅವರ ಸಂಬಂಧಿಕರಾದ ನಝೀರ್ ಅರ್ಶದಿ ಅಜ್ಜಿಕಟ್ಟೆ ಅವರಿಗೆ ಪ್ರವೇಶ ಪತ್ರಿಕೆಯನ್ನು ನೀಡುವ ಮೂಲಕ ಹೊಸ ದಾಖಲಾತಿಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್, ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕರಾದ ಮುಹಮ್ಮದ್ ಸಾಬ್ ಹಾಜಿ, ಅಸ್ವಾಲಿಹಾ ವುಮೆನ್ಸ್ ಶರೀಅತ್ ,ಪಿ.ಯು. ಕಾಲೇಜ್ ನ ಸಂಚಾಲಕ ಹಾಜಿ ಅಬ್ದುಲ್‌ ರಹಿಮಾನ್ ಅಝಾದ್ ದರ್ಬೆ, ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ, ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮುಸ್ತಫಾ, ಸಾಲ್ಮರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹನಾಂಗಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಂಬೋಳ್ ತಂಙಳ್ ರವರು ವಿಶೇಷ ಪ್ರಾರ್ಥನೆ ನಡೆಸಿ ವಿದ್ಯಾರ್ಥಿಗಳ ಯಶಸ್ವಿ ಗಾಗಿ ಶುಭ ಹಾರೈಸಿದರು.

ಸಾಲ್ಮರ ಪ್ರೌಢಶಾಲಾ ಶಿಕ್ಷಕ ಅಬ್ದುಲ್ ರವೂಫ್ ಸ್ವಾಗತಿಸಿದರು.ದೈಹಿಕ ಶಿಕ್ಷಕ‌ ಅಶ್ರಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!