March 22, 2026

ಕಾರ್ಕಳ: ತಾಯಿಯ ಅಕಾಲಿಕ ಸುದ್ದಿ ತಿಳಿದು ಮಗಳು ಆತ್ಮಹತ್ಯೆ

0
dead-4-1.jpg

ಕಾರ್ಕಳ: ತಾಯಿಯ ಅಕಾಲಿಕ ನಿಧನದ ಸುದ್ದಿ ತಿಳಿದು ಮಗಳು ಮನೆ ಸಮೀಪದ ಕೆರೆ ಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ನೂರಾಲ್ ಬೆಟ್ಟು ಕಜೆ ಎಂಬಲ್ಲಿ ಸಂಭವಿಸಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಭಾಗಿ(65) ಎಂಬವರು ಮಂಗಳವಾರ ಬೆಳಿಗ್ಗೆ ಸುಮಾರು 10 ವೇಳೆಯಲ್ಲಿ ಮನೆಯಲ್ಲಿ ಮೃತಪಟ್ಟಿದ್ದರು.

ಈ ನಡುವೆ ಭಾಗಿಯ ಮಗಳು ರೇಖಾ(25) ಎಂಬಾಕೆ ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಯ ಕೆಲಸಕ್ಕೆಂದು ಹೊರಟು ಹೋಗಿದ್ದ ಆಕೆಗೆ ಪರಿಚಯಸ್ಥರೊಬ್ಬರ ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಮನೆಗೆ ಬಾ ಎಂದು ಎಂದಿದ್ದರು.

ಅಸೌಖ್ಯದಲ್ಲಿ ಇರುವ ತಾಯಿಗೆ ಏನಾಯಿತ್ತೆಂಬ ಪ್ರಶ್ನೆ ಆಕೆಯಲ್ಲಿ ಕಾಡುತ್ತಿರುವ ನಡುವೆ ತಾಯಿ ಮೃತಪಟ್ಟಿರಬೇಕೆಂಬ ಅನುಮಾನದ ಹಿನ್ನಲೆಯಲ್ಲಿ ಕೆಲಸದಿಂದ ಹಿಂತಿರುಗಿದ್ದ ರೇಖಾ ಮನೆಗೆ ಹೋಗುವ ಮುನ್ನವೇ ಪರಿಸರದ ಕೆರೆಗೆ ಹಾರಿ ಆತ್ಮಹತ್ಯೆಗೈದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿಯರು ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!