May 11, 2026

ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ರೋಗಿಯನ್ನು ಎಳೆದುಕೊಂಡು ಹೋಗಿರುವ ಮನಕಲಕುವ ವೀಡಿಯೋ ವೈರಲ್

0
image_editor_output_image827093413-1679861835488.jpg

ಭೋಪಾಲ್: ಅದು ಸಾವಿರ ಬೆಡ್‍ಗಳಿರುವ ಜಿಲ್ಲೆಯ ಅತ್ಯಂತ ದೊಡ್ಡ ಆಸ್ಪತ್ರೆ. ಆದರೆ ಇಂತಹ ಆಸ್ಪತ್ರೆಯಲ್ಲಿ ವೃದ್ದರೊಬ್ಬರನ್ನು ಸ್ಟ್ರೆಚರ್ ಇಲ್ಲದೆ ಬಟ್ಟೆಯಲ್ಲಿಯೇ ಎಳೆದುಕೊಂಡು ಹೋಗಿರುವ ಮನಕಲಕುವ ಘಟನೆ ನಡೆದಿದೆ.

ಹೌದು. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿರುವ ಆಸ್ಪತ್ರೆ ಸದ್ಯ ಸುದ್ದಿಯಲ್ಲಿದೆ. ಎರಡೂ ಕಾಲುಗಳು ಗಾಯಗೊಂಡಿರುವ ವೃದ್ದರೊಬ್ಬರು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬಂದಿದ್ದಾರೆ.

ಆದರೆ ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಇಲ್ಲದೆ ಸಂಬಂಧಿಕರೊಬ್ಬರು ಬಟ್ಟೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿ ಎಳೆದುಕೊಂಡು ಹೋಗಿದ್ದಾರೆ.

ಇದರ ವೀಡಿಯೋವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

error: Content is protected !!