March 11, 2026

ಮಂಗಳೂರು: ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ದಾಳಿ ನಡೆಸಿದ ಭಜರಂಗದಳ ಕಾರ್ಯಕರ್ತರು

0
IMG-20230326-WA0012.jpg

ಮಂಗಳೂರು: ನಗರದ ಮರೋಳಿ ಎಂಬಲ್ಲಿ ರಂಗ್ ದೇ ಬರ್ಸಾ ಹೆಸರಿನಲ್ಲಿ ನಡೆಯುತ್ತಿದ್ದ ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರ ದಾಳಿ ನಡೆಸಿರುವ ಘಟನೆ ನಡೆದಿದೆ.

ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಯುವಕ-ಯುವತಿಯರು ಸಂಭ್ರಮಿಸುತ್ತಿದ್ದು, ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಎಂದು ಆರೋಪಿಸಿ ಭಜರಂಗದಳ ದಾಳಿ ನಡೆಸಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದಿದ್ದಾರೆ.

ಈ ವೇಳೆ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಭಜರಂಗದಳದ ಕಾರ್ಯಕರ್ತರು ಆಯೋಜಕರು ಮತ್ತು ಕೆಲವರ ಮೇಲೆ ಹಲ್ಲೆಗೂ ಯತ್ನಿಸಿರುವುದಾಗಿ ವರದಿಯಾಗಿದೆ.

ಇನ್ನು ಪೊಲೀಸರು ಮಧ್ಯ ಪ್ರವೇಶಿಸಿ ಭಜರಂಗದಳ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!