March 11, 2026

ಪುತ್ತೂರು: ನೇತ್ರಾವತಿ ನದಿಗೆ ಹಾರಿ ವಿಘ್ನೇಶ್ ಕಾಮತ್ ಆತ್ಮಹತ್ಯೆ

0
IMG-20230326-WA0014.jpg

ಪುತ್ತೂರು: ಕೋರ್ಟ್ ರೋಡಿನಲ್ಲಿರುವ ಅಂಗಡಿಯೊಂದರ ಮಾಲಕ ದಿವಂಗತ ವಿಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (32) ಅವರು ಭಾನುವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ.

ಕೆಮ್ಮಿಂಜೆ ನಿವಾಸಿಯಾಗಿರುವ ಇವರು, ಕೋರ್ಟ್ ರೋಡಿನಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಹೇಳಲಾಗಿದೆ.

ಇನ್ನು ನೇತ್ರಾವತಿ ಸೇತುವೆಯಲ್ಲಿ ಜೂಪಿಟಾರ್ಮೊ KA21v3955 ಇಟ್ಟು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು.

ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!