May 11, 2026

ಕೋರ್ಟ್‌ ಆವರಣದಲ್ಲೇ ಪತ್ನಿ ಮುಖದ ಮೇಲೆ ಆ್ಯಸಿಡ್ ಎರೆಚಿದ ಪತಿ!
 

0
hr-230323-acid.jpg

ಚೆನ್ನೈ: ತಮಿಳುನಾಡಿನ ಕೊಯಮತ್ತೂರುನಲ್ಲಿ ಕೋರ್ಟಿನ ಆವರಣದಲ್ಲೇ ಪತ್ನಿಯ ಮುಖದ ಮೇಲೆ ಪತಿಯೊಬ್ಬ ಆ್ಯಸಿಡ್ ಎಸೆದಿರುವ ಘಟನೆ ಗುರುವಾರ ನಡೆದಿದೆ.

ಚಿತ್ರಾ ಎನ್ನುವ ಮಹಿಳೆ ತನ್ನ ಪತಿಯ ಮೇಲೆ ದೂರು ದಾಖಲಿಸಿದ್ದು, ಪತಿ ವಿರುದ್ಧ ಮಹಿಳೆ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಕೋರ್ಟ್ ಮುಂದಾದಾಗ ಆ್ಯಸಿಡ್ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.

ಇನ್ನು ಪತಿಯ ವಿರುದ್ದ ಪತ್ನಿ ವಿರುದ್ದ ದೂರು ದಾಖಲು ಮಾಡಿದ್ದು, ಇದರ ವಿಚಾರಣೆಗೆ ಬಂದ ಪತಿ ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತುಂಬಿಸಿಕೊಂಡು ಕೋರ್ಟಿನ ಆವರಣಕ್ಕೆ ತಂದಿದ್ದಾನೆ. ಇನ್ನೇನು ವಿಚಾರಣೆ ಆರಂಭಗೊಳ್ಳಬೇಕು ಅಷ್ಟು ಹೊತ್ತಿಗೆ ಪತಿ ಶಿವಕುಮಾರ್‌ ಪತ್ನಿ ಚಿತ್ರ ಮುಖದ ಮೇಲೆ ಆಯಸಿಡ್‌ ಎಸೆದಿದ್ದಾನೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!