May 11, 2026

ಶಿರ್ವ: ಬೈಕ್‌ಗೆ ರಿಕ್ಷಾ ಢಿಕ್ಕಿ: ಸವಾರರಿಬ್ಬರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

0
IMG-20230306-WA0037.jpg

ಶಿರ್ವ: ರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಕಟಪಾಡಿ – ಶಿರ್ವ ಮುಖ್ಯರಸ್ತೆಯ ನ್ಯಾರ್ಮ ಸೊಸೈಟಿ ಬಳಿ ನಡೆದಿದೆ.

ಕಟಪಾಡಿ ಕಡೆಯಿಂದ ಶಿರ್ವದೆಡೆಗೆ ಬರುತ್ತಿದ್ದ ಬೈಕ್‌ ಸವಾರರಿಗೆ ಶಿರ್ವ ಕಡೆಯಿಂದ ತೆರಳುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ರಿಕ್ಷಾ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆೆ.

ಇನ್ನು ಗಂಭೀರ ಗಾಯಗೊಂಡ ಯುವಕರನ್ನು ಸ್ಥಳೀಯರು ಸೇರಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ಯುವಕರು ಅನ್ಯ ರಾಜ್ಯದ ಕಾರ್ಮಿಕರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!