ಅನಂತಾಡಿ, ನೆಟ್ಲಮುಡ್ನೂರು, ಮಾಣಿ, ಪೆರಾಜೆ, ಕಡೇಶ್ವಾಲ್ಯ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ-ಬೃಹತ್ ಬೈಕ್ ರ್‍ಯಾಲಿ: ಕಾಂಗ್ರೆಸ್ ನಲ್ಲಿ ಇದ್ದಾಗ ಸರಿಯಾಗಿದ್ದವರು ಬಿಜೆಪಿ ಸಹವಾಸದಿಂದ ಹಾಳಾಗಿ ಹೋಗುತ್ತಿದ್ದಾರೆ ಎಂದ ಸುಧೀರ್ ಕುಮಾರ್ ಮರೋಳಿ
ವಿಟ್ಲ: ಉತ್ತು, ಬಿತ್ತಿ, ಬೆಳೆಯದು ಗೊತ್ತಿಲ್ಲದ ಮೋದಿ, ಅಮಿತ್ ಷಾ ಇರುವ ಪಕ್ಷಕ್ಕೆ ರೈತರ ಸಮಾವೇಶ ಮಾಡಲು ಯಾವ ಅರ್ಹತೆಯೂ ಇಲ್ಲ. ಪಹಣಿಯ ಹಣವನ್ನು ಹೆಚ್ಚಿಸುವ ಮೂಲಕ ರೈತರಿಗೆ ಆರ್ಥಿಕ ಹೊರೆಯನ್ನು ಹೇರುವ ಕಾರ್ಯ ಬಿಜೆಪಿ ಮಾಡಿದೆ. ಜನರು ತಮ್ಮ ಹಣದಲ್ಲಿ ಕಟ್ಟು ವಿವಿಧ ಯೋಜನೆಗೆ ಮೋದಿಯವರ ಚಿತ್ರ ಅಂಟಿಸುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಇದ್ದಾಗ ಸರಿಯಾಗಿದ್ದವರು ಬಿಜೆಪಿ ಸಹವಾಸದಿಂದ ಹಾಳಾಗಿ ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.


ಅವರು ಬುಧವಾರ ಕೊಡಾಜೆ ಕೆ.ಎಸ್. ಹೋಟೇಲ್ ಸಮೀಪ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸಾಮಾಜಿಕ ನ್ಯಾಯ ನೀಡುವ ಹಲವು ಯೋಜನೆಗಳನ್ನು ಬಡ ಜನರಿಗೆ ನೀಡಲಾಗಿದೆ. ವಿವಿಧ ಯೋಜನೆಯ ಮೂಲಕ ಅಭಿವೃದ್ಧಿಯ ಕೆಲಸ ಮಾಡಿ ತೋರಿಸಿದ್ದು, ಎಲ್ಲರ ಬೆಂಬಲ ಯಾಚಿಸುವ ನಿಟ್ಟಿನಲ್ಲಿ, ಬಂಟ್ವಾಳ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಧ್ಯ ಆಗದ ಯೋಜನೆಯನ್ನು ಜನರಿಗೆ ಭರವಸೆ ನೀಡುವ ಕಾರ್ಯ ಕಾಂಗ್ರೆಸ್ ಮಾಡಿಲ್ಲ ಎಂದು ತಿಳಿಸಿದರು.
ಅನಂತಾಡಿ, ನೆಟ್ಲಮುಡ್ನೂರು, ಮಾಣಿ, ಪೆರಾಜೆ, ಕಡೇಶ್ವಾಲ್ಯ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಿತು. ಬೈಕ್ ರ್‍ಯಾಲಿಯನ್ನು ಈ ಸಂದರ್ಭ ನಡೆಸಲಾಯಿತು.
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಮಹಮ್ಮದ್ ಶೆರೀಫ್, ಸಂಜೀವ ಪೂಜಾರಿ, ಪಿಯೂಸ್ ಎಲ್. ರೋಡ್ರಿಗಸ್, ಸದಾಶಿವ ಬಂಗೇರ, ವಾಸು ಪೂಜಾರಿ, ಲೋಲಾಕ್ಷಿ ಶೆಟ್ಟಿ, ಸಿದ್ದಿಕ್ ಗುಡ್ಡೆಯಗಂಡಿ, ಐಡಾ ಸುರೇಶ್, ಪಿ. ಎ. ರಹೀಮ್, ನಂದ ಕುಮಾರ್, ರಘು, ವಿಜಯಕುಮಾರ್ ರೈ, ಬಾಲಕೃಷ್ಣ ಬಲ್ಲೇರಿ, ಅನ್ವರ್ ಕರೋಪಾಡಿ, ಅಬ್ಬಾಸ್ ಆಲಿ, ಸುಭಾಶ್ಚಂದ್ರ ಶೆಟ್ಟಿ, ಉಮಾನಾಥ, ಬೇಬಿ ಕುಂದರ್, ಮೋಹನ್ ಕುಲಾಲ್, ಮಂಜುಳಾ ಕುಶಲ, ರೋಹಿಣಿ, ಉಮ್ಮರ್, ವಿಕೇಶ್ ಶೆಟ್ಟಿ, ವಲಯ ಅಧ್ಯಕ್ಷರುಗಳಾದ ಕುಶಾಲ ಎಂ ಪೆರಾಜೆ, ಸತೀಶ್ ಪೂಜಾರಿ, ಶ್ರೀಧರ್ ರೈ, ಹರೀಶ್ ಚಂದ್ರ, ಪ್ರಮುಖರಾದ ಅಲ್ಬರ್ಟ್ ಮ್ಯಾನೇಜಸ್, ಬಾಲಕೃಷ್ಣ ಶೆಟ್ಟಿ, ಐಡಾ ಸುರೇಶ್, ಜಯಂತಿ ಪೂಜಾರಿ, ಇಬ್ರಾಹಿಂ ನವಾಜ್, ಹರ್ಷದ್ ಶರವು, ಸಿದ್ದಿಕ್ ಶರವು, ಮೋಹನ್ ಕುಲಾಲ್, ರಮೇಶ್ ಕುಲಾಲ್, ಮಂಜುಳಾ ಕುಶಾಲ, ಸಂಜೀವ ಪೂಜಾರಿ, ಸದಾಶಿವ ಬಂಗೇರ, ಪಿಎ ರಹೀಂ, ಅನ್ವರ್ ಕರೋಪಾಡಿ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ, ಉಪಾಧ್ಯಕ್ಷರಾದ ಉಮ್ಮರ್, ಸ್ಥಳೀಯರಾದ ನಿರಂಜನ್ ರೈ, ಅಮೀದ್ ಪಾಟ್ರಕೋಡಿ ಉಪಸ್ಥಿತರಿದ್ದರು.
ಸುದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಅಭಿವೃದ್ಧಿ ಕಾರ್ಯದ ಮಾಹಿತಿಯನ್ನು ನೀಡಿದರು.




