February 4, 2026

ಸರ್ಕಾರಿ ಶೌಚಾಲಯ ಕುಸಿದು 5 ವರ್ಷದ ಬಾಲಕ ಸಾವು

0
image_editor_output_image-1902873297-1678697704145.jpg

ಲಕ್ನೋ: ಕಳಪೆ ಕಾಮಗಾರಿಯ ಸರ್ಕಾರಿ ಶೌಚಾಲಯವೊಂದು ಕುಸಿದು 5 ವರ್ಷದ ಬಾಲಕನೊಬ್ಬ ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಖಿಂಪುರ ಖೇರಿ ಜಿಲ್ಲೆಯ ಮಗಲ್‌ಗಂಜ್ ಚಪರ್ತಾಲಾ ಗ್ರಮದಲ್ಲಿ ಘಟನೆ ನಡೆದಿದೆ.

ಸರ್ಕಾರ ನಿರ್ಮಿಸಿದ ಶೌಚಾಲಯ ಕುಸಿದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ಬಾಲಕ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾನೆ.

ವರದಿಗಳ ಪ್ರಕಾರ, ಬಾಲಕ ಮನೆ ಹೊರಗಡೆ ಆಟವಾಡುತ್ತಿದ್ದ ಸಂದರ್ಭ ಅಲ್ಲೇ ನಿರ್ಮಿಸಲಾಗಿದ್ದ ಸರ್ಕಾರಿ ಶೌಚಾಲಯ ಆತನ ಮೇಲೆ ಏಕಾಏಕಿ ಕುಸಿದು ಬಿದ್ದಿದೆ.

ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಕುಟುಂಬದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!