February 4, 2026

ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜ್‌ ಹಾಕಿದ್ದ ಬೈಕ್‌  ಸ್ಫೋಟ: ಗೃಹ ಉಪಯೋಗಿ ವಸ್ತುಗಳು ಭಸ್ಮ

0
image_editor_output_image96271975-1678695607751.jpg

ಮಂಡ್ಯ: ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜ್‌ ಹಾಕಿದ್ದ ಬೈಕ್‌ವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ಜರುಗಿದೆ.

ವಳೆಗೆರೆಹಳ್ಳಿಯ ಮುತ್ತುರಾಜ್ ಎಂಬುವವರ ಮನೆಯ ಒಳ ಭಾಗದಲ್ಲಿ ಬೈಕ್ ಚಾರ್ಜ್ ಹಾಕಿದ್ದ ವೇಳೆ ಈ ಘಟನೆ ಜರುಗಿದೆ.

ಬೈಕ್ ಚಾರ್ಜ್ ಹಾಕಿದ್ದ ವೇಳೆ ಇದಕ್ಕಿದ್ದ ಹಾಗೆ ಸ್ಫೋಟಗೊಂಡಿದ್ದು, ಈ ವೇಳೆ‌ ಮನೆಯ ಒಳಭಾಗದಲ್ಲಿ ಇದ್ದ 5 ಮಂದಿ ಬೆಚ್ಚಿ ಬಿದ್ದಿದ್ದಾರೆ.

ಅದೃಷ್ಟವಶಾತ್ ಎಲ್ಲರೂ ಬೈಕ್‌ನಿಂದ ದೂರವಿದ್ದರಿಂದ ಪ್ರಾಣಾಪಾಯದಿಂದ ಪಾರಗಿದ್ದಾರೆ.

ಇನ್ನೂ ಈ ಸ್ಫೋಟದಿಂದ ಪಕ್ಕದಲ್ಲಿ‌ ಇದ್ದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿದಂದೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.

ಬಳಿಕ ಸ್ಫೋಟದ ಬೆಂಕಿಯನ್ನು‌ ಕುಟುಂಬಸ್ಥರು ನಂದಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ

Leave a Reply

Your email address will not be published. Required fields are marked *

error: Content is protected !!