February 2, 2026

ಪ್ಯಾಂಟ್, ಟೀ ಶರ್ಟ್ ನಲ್ಲಿ ಚಿನ್ನ ಅಕ್ರಮ ಸಾಗಾಟ: 1 ಕೋಟಿ ರೂ. ಮೌಲ್ಯದ ಚಿನ್ನ ಸಹಿತ ಆರೋಪಿಯ ಬಂಧನ

0
image_editor_output_image-281018225-1677046043913.jpg

ಕೇರಳ: ಪ್ಯಾಂಟ್ ಮತ್ತು ಟೀ ಶರ್ಟ್ನಲ್ಲಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕರ ಮೂಲದ ಮುಹಮ್ಮದ್ ಸಫ್ವಾನ್ (37) ಬಂಧಿತ ಆರೋಪಿ. ಇಂದು ಬೆಳಗ್ಗೆ 8.30ಕ್ಕೆ ದುಬೈನಿಂದ ಇಂಡಿಗೋ ವಿಮಾನದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.

ಈತ 1.7 ಕೆಜಿ ಚಿನ್ನವನ್ನು ಉಡುಪಿನಲ್ಲಿ ಲೇಪಿಸಿಕೊಂಡು ಪ್ರಯಾಣಿಸಿದ್ದ. ಈ ವರ್ಷದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಪೊಲೀಸರಿಗೆ ಸಿಕ್ಕಿಬಿದ್ದ ಚಿನ್ನ ಕಳ್ಳಸಾಗಣೆಯ 12ನೇ ಪ್ರಕರಣ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!