KSRTC ಸ್ಲೀಪರ್ ಬಸ್‌ನಲ್ಲಿ ಯುವತಿಯ ಮೇಲೆ ಮೂತ್ರ ಮಾಡಿದ ಪ್ರಯಾಣಿಕ

ಬೆಂಗಳೂರು: ವಿಮಾನದಲ್ಲಿ ಆಯ್ತು ಈಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಯೇ ಸಹ ಪ್ರಯಾಣಿಕ ಮಹಿಳೆಯೊಬ್ಬರ ಮೇಲೆ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಲೀಪರ್ ಬಸ್‌ನಲ್ಲಿ ಈ ಘಟನೆ ಜರುಗಿದೆ.
ಆ ಬಳಿಕ ಪ್ರಯಾಣಿಕರೆಲ್ಲರೂ ಬೇಸತ್ತು ಮೂತ್ರ ವಿಸರ್ಜನೆ ಮಾಡಿದ್ದ ಯುವಕನನ್ನು ಬಸ್ ಕಂಡಕ್ಟರ್, ಚಾಲಕ ಸೇರಿದಂತೆ ಪ್ರಯಾಣಿಕರೆಲ್ಲರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯಯದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಯುವತಿ ಕೆಎಸ್‌ಆರ್‌ಟಿಸಿ ಬಸ್‌ನ ಸೀಟ್ ನಂಬರ್ 3ರಲ್ಲಿ ಇದ್ದರು. ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ ಯುವಕ ರಾಮಪ್ಪ ಎಂಬಾತ ಅದೇ ಬಸ್‌ನಲ್ಲಿ ಸೀಟ್ ನಂಬರ್ 28ರಲ್ಲಿ ಪ್ರಯಾಣಿಸುತ್ತಿದ್ದನು.
ಬಸ್ ಕಿರೇಸೂರು ಎಂಬ ಬಳಿ ರಾತ್ರಿ ಊಟಕ್ಕೆಂದು ಡಾಬಾದಲ್ಲಿ ನಿಲ್ಲಿಸಿತ್ತು. ಆ ಸಂದರ್ಭದಲ್ಲಿ ರಾಮಪ್ಪ ಎಂಬ ಯುವಕ ತನ್ನ ಸೀಟ್‌ನಿಂದ ಎದ್ದು ಬಂದು ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.