ಪುತ್ತೂರು: “ಉಬಾರ್ ಕಪ್” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ
ಪುತ್ತೂರು: `ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯಲ್ಲಿ ನಿನ್ನೆ ನಡೆದ ಹೊನಲು ಬೆಳಕಿನ `ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಮಂಗಳೂರಿನ ರೋಲನ್ ಪಿಂಟೋ ಎಂಬ ತೀರ್ಪುಗಾರನ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳೂರಿನ ಕಾನಾ-ಕೆಜಿಎಫ್ ನಡುವೆ ನಡೆಯುತ್ತಿದ್ದ ಸೆಮಿಫೈನಲ್ ಪಂದ್ಯಾಟ ನಡೆಯುತ್ತಿತ್ತು, ಈ ವೇಳೆ ಅಂಪೈರ್ ರೋಲನ್ ಪಿಂಟೋ ಎಲ್‍ಬಿಡಬ್ಲ್ಯು ತೀರ್ಪನ್ನ ನೀಡಿದ್ದರು, ಆದರೆ ಅದು ತಪ್ಪು ಎಂದು ಹೊರಗಿನಿಂದ ಬಂದ ಕೆಲ ಯುವಕರಿಂದ ಸೀದಾ ಮೈದಾನಕ್ಕೆ ನುಗ್ಗಿ ಅಂಪೈರ್ ಮೇಲೆ ಹಲ್ಲೆ ಮುಂದಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





