September 24, 2026

ಕಾಲುವೆಗೆ ಬಿದ್ದು ಬಾಲಕ ಮೃತ್ಯು

0
image_editor_output_image402675746-1677045574624.jpg

ವಿಜಯಪುರ: ಕಾಲುವೆಗೆ ಜಾರಿ ಬಿದ್ದು ಬಾಲಕ ಸಾವಿಗೀಡಾದ ಘಟನೆ ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಲ್ಲಯ್ಯ ಹಿರೇಮಠ (13) ಎಂದು ಗುರುತಿಸಲಾಗಿದೆ.

ನಿನ್ನೆ ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ ಜಮೀನಿನಲ್ಲಿದ್ದ ತನ್ನ ತಂದೆ ಗಂಗಯ್ಯನನ್ನು ಭೇಟಿಯಾಗಲು ತೆರಳಿದ್ದ.

 

ಈ ವೇಳೆ ಕಾಲು ಜಾರಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದು ಬಾಲಕ ಸಾವಿಗೀಡಾಗಿದ್ದಾನೆ. ಕತ್ತಲಾದರೂ ಮನೆಗೆ ವಾಪಸ್ ಮರಳದ ಬಾಲಕನಿಗೆ ಹುಡುಕಾಟ ಆರಂಭಿಸಿದ್ದರು.

ಇಂದು ಬೆಳಗ್ಗೆ ಬಾಲಕನ ಶವ ಜಮೀನಿನ ಬಳಿ ಹಾದು ಹೋಗಿರುವ ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಲ್ಲಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!