ಬಸ್ ಹರಿದು ಪ್ರಯಾಣಿಕ ಸ್ಥಳದಲ್ಲೇ ಮೃತ್ಯು
ಕುಷ್ಟಗಿ: ತಾವರಗೇರಾ ಪಟ್ಟಣದ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹರಿದು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.22ರ ಬುಧವಾರ ಬೆಳಗ್ಗೆ ಸಂಭವಿಸಿದೆ.
ವ್ಯಕ್ತಿ ಕಲಮಂಗಿ ಮೂಲದವರು ಎಂದು ಹೇಳಲಾಗುತ್ತಿದೆ.
ಸಿಂಧನೂರು ಡಿಪೋ ಬಸ್ಸು ತಾವರಗೇರಾ ಮಾರ್ಗವಾಗಿ ಕುಷ್ಟಗಿ ಕಡೆ ಹೊರಟಿತ್ತು. ತಾವರಗೇರಾ ಬಸ್ ನಿಲ್ದಾಣದ ಕೂಗಳತೆಯಲ್ಲಿರುವ ಸಿಂಧನೂರು ಕ್ರಾಸ್ ನಲ್ಲಿ ಪ್ರಯಾಣಿಕನನ್ನು ಇಳಿಸಿ ಬಸ್ಸು ಮುಂದೆ ಸಾಗಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.





