September 24, 2026

‘ಗೃಹಲಕ್ಷ್ಮೀ ಯೋಜನೆ’ ಹೊಸ ಮಾರ್ಗಸೂಚಿ ಬಿಡುಗಡೆ:
ಫಲಾನುಭವಿ ಮಹಿಳೆಯ ಪತಿಯ ಆಧಾರ್ ಸಂಖ್ಯೆ ಕಡ್ಡಾಯ

0
image_editor_output_image1652533586-1790232353017

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಫಲಾನುಭವಿ ಮಹಿಳೆಯರು ಪತಿಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಮಹಿಳೆಯ ಆಧಾರ್ ಕಾರ್ಡ್ ಮಾತ್ರವಲ್ಲದೆ ಆಕೆಯ ಪತಿಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮಹಿಳೆಯರು ನೀಡುವ ಬ್ಯಾಂಕ್ ಖಾತೆಗೆ ಯಾವುದೇ ರೀತಿಯ ಸಾಲದ ಲಿಂಕ್ ಇರಬಾರದು. ಒಂದು ವೇಳೆ ಸಾಲ ಇರುವ ಖಾತೆಯನ್ನು ನೀಡಿದ್ದರೆ ಅಥವಾ ಆಧಾರ್ ಕಾರ್ಡ್‍ನಲ್ಲಿರುವ ಹೆಸರು ಮತ್ತು ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಸಹ ಪ್ರತಿ ತಿಂಗಳು ಬರುವ 2ಸಾವಿರ ರೂ.ನಗದು ವರ್ಗಾವಣೆ ತಕ್ಷಣವೇ ಸ್ಥಗಿತಗೊಳ್ಳಲಿದೆ.

ಜತೆಗೆ, ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆಗಾಗಿ ಸರಕಾರ ವಿಶೇಷ ತನಿಖಾ ತಂಡ ಅಥವಾ ಗಣತೀದಾರರನ್ನು ನಿಯೋಜಿಸಲಿದೆ. ಈ ಅಧಿಕಾರಿಗಳು ನೇರವಾಗಿ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಕೇವಲ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಮಹಿಳೆಯರ ಮುಖದ ಗುರುತು ಹಿಡಿಯುವ ‘ಫೇಶಿಯಲ್ ದೃಢೀಕರಣ’ ಹಾಗೂ ಜಿಪಿಎಸ್ ಆಧಾರಿತ ಮನೆ ಫೋಟೋವನ್ನು ಸ್ಥಳದಲ್ಲೇ ಅಪ್‍ಲೋಡ್ ಮಾಡಿಕೊಳ್ಳಲಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!