RSS ಜೊತೆ ಜಮಾಅತೆ ಇಸ್ಲಾಮಿ ಸಭೆ: ಪಿಣರಾಯಿ ವಿಜಯನ್ ಟೀಕೆ
ತಿರುವನಂತಪುರಂ: ಜಮಾತೆ ಇಸ್ಲಾಮಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಜತೆ ಸಂವಾದ ನಡೆಸುತ್ತಿರುವುದಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಟುವಾಗಿ ಟೀಕಿಸಿದ್ದಾರೆ.
ಸಂಘ ಪರಿವಾರದ ಜತೆ ಭಿನ್ನಾಭಿಪ್ರಾಯಗಳನ್ನು ಮೀರಿ ಮಾತುಕತೆಯ ಅಗತ್ಯವಿದೆ ಎನ್ನುವ ಜಮಾತೆ ಇಸ್ಲಾಮಿ ವಾದವು ಮುಸ್ಲಿಂ ಸಂಘಟನೆಯ ಆಷಾಢಭೂತಿತನವನ್ನು ತೋರ್ಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ದೆಹಲಿಯಲ್ಲಿ ಜಮಾತೆ ಇಸ್ಲಾಮಿ ಮತ್ತು ಆರ್‌ಎಸ್‌ಎಸ್ ನಡುವೆ ನಡೆದ ಸಂವಾದದ ಕುರಿತು ಕೇರಳ ಮುಖ್ಯಮಂತ್ರಿ ಇದೀಗ ಟೀಕಿಸಿದ್ದು, ” ಆ ಸಭೆಯಲ್ಲಿ ಆರ್‌ಎಸ್‌ಎಸ್ ಜತೆ ಜಮಾತೆ ಎ ಇಸ್ಲಾಮಿಯು ಏನು ಚರ್ಚಿಸಿದೆ? ಆ ಸಭೆಯ ವಿಷಯ ಏನು ಎನ್ನುವುದು ಜಮಾತೆ ಇಸ್ಲಾಮಿಯ ನಾಯಕರು ಸ್ಪಷ್ಟಪಡಿಸಬೇಕು” ಎಂದರು.




