ಅವಾರ್ಡ್ ಕಾರ್ಯಕ್ರಮದಲ್ಲಿ ಕುಸಿದುಬಿದ್ದು ನಟ ಶಹನವಾಝ್ ಮೃತ್ಯು
ಮುಂಬಯಿ: ಹತ್ತಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ, ಬಾಲಿವುಡ್ ನಟ ಶಹನವಾಜ್ ಪ್ರಧಾನ್ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮುಂಬಯಿನಲ್ಲಿ ನಡೆಯುತ್ತಿದ್ದ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಶಹನವಾಜ್ ಪ್ರಧಾನ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಜೊತೆಗಿದ್ದವರ ಬಳಿ ಎದೆನೋವು ಆಗುತ್ತಿದೆ ಎಂದು ಹೇಳಿದ್ದರು.
ಇದಾದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಬದುಕು ಬರಲು ಸಾಧ್ಯವಾಗಿಲ್ಲ. ಹಠಾತ್ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.




