March 21, 2026

ಕೋಟೇಶ್ವರ ಬೀಜಾಡಿ ಕ್ರಾಸ್ ಬಳಿ ಆ್ಯಂಬುಲೆನ್ಸ್, ಲಾರಿ, ಟಿಪ್ಪರ್ ಸರಣಿ ಅಪಘಾತ

0
image_editor_output_image-1953411474-1676452705113.jpg

ಉಡುಪಿ : ಜಿಲ್ಲೆಯ ಕುಂದಾಪುರ ಕೋಟೇಶ್ವರ ಬೀಜಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆ್ಯಂಬುಲೆನ್ಸ್, ಲಾರಿ ಹಾಗೂ ಟಿಪ್ಪರ್ ನಡುವೆ ಸರಣಿ ಅಪಘಾತ ನಡೆದಿದೆ.

ವಕ್ವಾಡಿಯಿಂದ ರೋಗಿಯನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗುವ ಸಂದರ್ಭ ಬೀಜಾಡಿ ಕ್ರಾಸ್ ಬಳಿ ಸರ್ವಿಸ್ ರಸ್ತೆಯಿಂದ ಬಂದ ಆ್ಯಂಬುಲೆನ್ಸ್ ಹೆದ್ದಾರಿಗೆ ಬರುವಾಗ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ಲಾರಿ ಆ್ಯಂಬುಲೆನ್ಸ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಆ್ಯಂಬುಲೆನ್ಸ್ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರಿಗೆ ಬಡಿದು ನಿಂತಿದೆ.

ಅಪಘಾತದಿಂದ ಆ್ಯಂಬುಲೆನ್ಸ್ ನಲ್ಲಿ ರೋಗಿ ಜೊತೆಗಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು. ಆ್ಯಂಬುಲೆನ್ಸ್ ಚಾಲಕ ಅಯೂಬು ಕೋಟೇಶ್ವರ ಪ್ರಾಣಪಾಯದಿಂದ ಪಾರಾಗಿದ್ದಾರೆ.

ತಕ್ಷಣ ಸ್ಥಳೀಯರು ರೋಗಿ ಹಾಗೂ ಗಾಯಗೊಂಡವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!