ಚಿಕ್ಕಮಗಳೂರು: ಅನವಶ್ಯಕವಾಗಿ ವ್ಯಕ್ತಿಗೆ ಹಲ್ಲೆ: ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸರು ಸಸ್ಪೆಂಡ್
ಚಿಕ್ಕಮಗಳೂರು: ವ್ಯಕ್ತಿಯೋರ್ವನ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಿದ ಆರೋಪದಡಿ, ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಸಸ್ಪೆಂಡ್ ಮಾಡಿದ್ದಾರೆ.
ವಸಂತ್ ಮತ್ತು ಲೋಹಿತ್ ಅಮಾನತಾದ ಕಾನ್ಸ್ಟೇಬಲ್ಗಳು. ಹಾಗೇ ಮೂಡಿಗೆರೆ ಸಬ್ಇನ್ಸ್ಪೆಕ್ಟರ್ ಆದರ್ಶ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಕಳ್ಳತನ ಪ್ರಕರಣ ಸಂಬಂಧ ಪೊಲೀಸ್ ಪೇದೆಗಳು ದಾರದಹಳ್ಳಿ ನಿವಾಸಿ ಮಂಜು ಎಂಬುವರನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆಂದು, ಮಂಜು ಪತ್ನಿ ಯಶೋಧ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಕಾನ್ಸ್ಟೇಬಲ್ಗಳನ್ನು ಸಸ್ಪೆಂಡ್ ಮಾಡಿದ್ದು, ಸಬ್ಇನ್ಸ್ಪೆಕ್ಟರ್ ಆದರ್ಶ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ, ಮಂಜುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.




