March 20, 2026

ಉಡುಪಿ| ಬೈಕ್ ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವತಿ ಮೃತ್ಯು

0
image_editor_output_image1659559213-1676356384748.jpg

ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ನಿಶ್ಚಿತಾರ್ಥವಾಗಿದ್ದ ಯುವತಿಯೊರ್ವಳು ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವತಿ ಮಂಗಳೂರಿನ ರೋಶ್ನಿ ಡಿಸೋಜ (27) ಎಂದು ತಿಳಿದುಬಂದಿದೆ. ರೋಶ್ನಿ ತನಗೆ ಮದುವೆ ನಿಶ್ಚಯವಾಗಿದ್ದ ಜೋಯಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚ್‌‌ಗೆ ಭೇಟಿ ನೀಡಿ ಹಿಂದಕ್ಕೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ.

ಮೂಡುಬೆಟ್ಟು ಅಂಬಿಕಾ ಟಿಂಬರ್ ಬಳಿ ಹಾಕಲಾಗಿದ್ದ ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಬೈಕ್ ಉರುಳಿ ಬಿದ್ದಿತ್ತು.

ಇದರಿಂದ ಬೈಕ್ ನಿಂದ ಎಸೆಯಲ್ಪಟ್ಟ ರೋಶ್ನಿ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ರೋಶ್ನಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಕಾಪು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!