ಮಂಜೇಶ್ವರ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು
ಮಂಜೇಶ್ವರ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದ ಸವಾರ ಮೃತ ಪಟ್ಟ ಘಟನೆ ಸೋಮವಾರ ಸಂಜೆ ಮಂಜೇಶ್ವರದ ವರ್ಕಾಡಿ ಬಳಿ ನಡೆದಿದೆ. ಕೊಡ್ಲಮೊಗರು ನಿವಾಸಿ ಮುಹಮ್ಮದ್ ಟಿ . ಮೃತಪಟ್ಟವರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮುಹಮ್ಮದ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.



