May 14, 2026

ರಸ್ತೆ ದಾಟುತ್ತಿದ್ದಾಗ ವಾಹನ ಢಿಕ್ಕಿ: ಐವರು ಮಹಿಳೆಯರು ಸ್ಥಳದಲ್ಲೇ ಸಾವು, 13 ಮಂದಿಗೆ ಗಾಯ

0
image_editor_output_image-443799570-1676356052207.jpg

ಮಹಾರಾಷ್ಟ್ರ: ಪುಣೆಯಿಂದ ಬರುತ್ತಿದ್ದ ವಾಹನ ಮಹಿಳೆಯರ ಗುಂಪಿನ ಮೇಲೆ ಹರಿದಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡ ಭೀಕರ ಘಟನೆ ಸೋಮವಾರ ರಾತ್ರಿ ನಡೆದಿದೆ.

ಖೇಡ್ ತಾಲೂಕಿನ ಶಿರೋಲಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಸೋಮವಾರ ರಾತ್ರಿ ವೇಳೆ 17 ಮಹಿಳೆಯರು ಇದೇ ಮಾರ್ಗವಾಗಿ ಹೋಗುತ್ತಿದ್ದರು.

ಈ ವೇಳೆ ಪುಣೆಯಿಂದ ಬರುತ್ತಿದ್ದ ವಾಹನ ಮಹಿಳೆಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರ ರುಂಡ ಮತ್ತು ಮುಂಡ ಬೇರ್ಪಟ್ಟಿದೆ. ಭೀಕರ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

ಗಾಯಗೊಂಡ 13 ಮಂದಿಯನ್ನು ಪೊಲೀಸರು ತಮ್ಮ ಜೀಪಿನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ತಕ್ಷಣದ ನೆರವಿನಿಂದಾಗಿ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಚಂಡೋಳಿ ಗ್ರಾಮಾಂತರ ಆಸ್ಪತ್ರೆ ಹಾಗೂ ರಾಜಗುರು ನಗರದ ನಾಲ್ಕೈದು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!