May 14, 2026

ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು VHP ಪುಂಡಾಟ: ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಪೊಲೀಸರು

0
image_editor_output_image834728205-1676355521844.jpg

ಮಹಾರಾಷ್ಟ್ರ: ಅನುಮತಿ‌ ಮೇರೆಗೆ‌‌ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪುಂಡಾಟ ಮಾಡುತ್ತಿದ್ದ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಕಾರ್ಯಕರ್ತರನ್ನು ಅರೆಬೆತ್ತಲೆ ಮಾಡಿ ಮನಬಂದಂತೆ ಥಳಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಘಟನೆ 4 ದಿನಗಳ ಹಿಂದೆ ನಡೆದಿದೆ. ಯುವಕರನ್ನು ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಫೆಬ್ರವರಿ 1 ರಂದು ಜಾನುವಾರುಗಳನ್ನು ಕಸಾಯಿಖಾನೆಗೆ ಅನುಮತಿ ಮೇರೆಗೆ ಸಾಗಣೆ ಮಾಡುತ್ತಿದ್ದ ವಾಹನವನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಡೆದ ಪ್ರಶ್ನಿಸಿದ್ದರು. ಈ ವೇಳೆ ಗಲಾಟೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದವರು ವಿಹಿಂಪ ಯುವಕರ ಮೇಲೆ ದೂರು ನೀಡಿದ್ದರು. ಇಸ್ಲಾಪುರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರಘುನಾಥ ಶೆವಾಲೆ ಪ್ರಕರಣ ದಾಖಲಿಸಿಕೊಳ್ಳದೇ ಯುವಕರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು.

ವಾಹನ ತಡೆದು ಗಲಾಟೆ ನಡೆಸಿದ ಬಗ್ಗೆ ಕೇಳಿದಾಗ ಯುವಕರು ಅಕ್ರಮವಾಗಿ ಜಾನುವಾರು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಇದಕ್ಕೆ ಸುಮ್ಮನಾಗದ ಅಧಿಕಾರಿ ಯುವಕರನ್ನು ಠಾಣೆಯಲ್ಲೇ ಅರೆಬೆತ್ತಲೆಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!