ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಪಾಟ್ರಕೋಡಿ: ನೂತನ ಅಧ್ಯಕ್ಷರಾಗಿ ಅಝಾರ್ ಪಾಟ್ರಕೋಡಿ ಆಯ್ಕೆ
ಕೆದಿಲ: ಗ್ರಾಮದ ಪಾಟ್ರಕೋಡಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಮಹಾಸಭೆಯು ಪಾಟ್ರಕೋಡಿ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಉಮ್ಮರ್ ಹಾಜಿ ಕರಿಮಜಲುರವರ ಅಧ್ಯಕ್ಷ ತೆಯಲ್ಲಿ ಜರುಗಿತ್ತು,
ಈ ಕಾರ್ಯಕ್ರಮವನ್ನು ಸ್ಥಳೀಯ ಜಮಾತಿನ ಖತೀಬರಾದ ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ರವರು ಉದ್ಘಾಟಿಸಿ ಮಾತನಾಡುತ್ತಾ, ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಎಂಬ ಈ ಸಂಘಟನೆಯ ಮೂಲಕ ಸದಸ್ಯರಾದ ಯುವಕರು ಮಾಡಿದ ಹಲವಾರು ಸಾಮಾಜಿಕ ಸೇವೆಯನ್ನು ಕೊಂಡಾಡಿದರು.
ಈ ಸಭೆಯಲ್ಲಿ 2023- 24 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು
ಅಧ್ಯಕ್ಷ ಅಝಾರ್ ಪಾಟ್ರಕೋಡಿ, ಉಪಾಧ್ಯಕ್ಷ ನಿಶಾದ್ ಕೆ ಪಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ತಮೀಮ್, ಸಂಘಟನ ಕಾರ್ಯದರ್ಶಿ ಝುಬೈರ್, ಕೋಶಾಧಿಕಾರಿ ಕೆ ಪಿ ಸಬೀತ್, ಕಾರ್ಯದರ್ಶಿ ನೌಶಾದ್ ಕೋಡಿ,ಲೆಕ್ಕ ಪರಿಶೋಧಕ ಅಜೀಮ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಸ್ತಾಪ, ಹರ್ಷದ್, ಮುಸ್ತಫಾ ಕೆ. ಕೆ., ತಾಜುದ್ದಿನ್, ಅಶೀಕ್, ಸಾದೀಕ್, ಸಿನಾನ್, ಸಪ್ವಾನ್, ನೌಶೀನ್, ನಿಝಾಮ್ ಕೋಡಿ, ರಫೀಕ್ ಮದನಿ, ಫಾರೂಕ್ ಬಾಯಬೆ, ಅಬೀದ್ ಬಿ. ಎಚ್. ಸಾಧೀಕ್ ಎಮ್, ಯಾಸೀನ್ ಕೋಡಿ ರವರನ್ನು ಆಯ್ಕೆಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ತಾಜುದ್ದಿನ್ ಬಾಯಬೆರವರು ಸ್ವಾಗತಿದರೆ, ನೌಶಾದ್ ಕೋಡಿರವರು ವಂದಿಸಿದರು.




