ಮಹಿಳೆಯರು ಸೆಗಣಿ ತಿಂದರೆ ಸಹಜ ಹೆರಿಗೆ, ಸಿಸೇರಿಯನ್ ಮಾಡಬೇಕಾದ ಅಗತ್ಯ ಇಲ್ಲ ಎಂದ ವೈದ್ಯ
ನವದೆಹಲಿ: ಹಸುವಿನ ಸೆಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎಂದು ಅನೇಕ ಮಂದಿ ನಂಬಿದ್ದಾರೆ. ಈ ಮಾತಿಗೆ ಪುಷ್ಟೀಕರಣ ನೀಡಲು ಇಲ್ಲೊಬ್ಬ ವೈದ್ಯರು ತಾವೇ ಮುಂದೆ ಬಂದಿದ್ದಾರೆ.
ಎಂಬಿಬಿಎಸ್ ಹಾಗೂ ಎಂದು ಪದವೀಧರರಾಗಿರುವ ಡಾ. ಮನೋಜ್ ಮಿತ್ತಲ್ ಅವರು ಗೋಶಾಲೆಯೊಂದರಲ್ಲಿ ನಿಂತುಕೊಂಡು ಸಗಣೆ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಹರಿಯಾಣದ ಕರ್ನಲ್‌ನಲ್ಲಿ ಮಕ್ಕಳ ತಜ್ಞರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ, “ಗೋವಿನ ಸೆಗಣಿ ಹಾಗೂ ಮೂತ್ರ ಸೇವನೆಯಿಂದ ಗಂಭೀರ ಕಾಯಿಲೆಗಳು ದೂರವಾಗುತ್ತದೆ. ಮಹಿಳೆಯರು ಸಗಣಿ ತಿನ್ನುವುದರಿಂದ ಹೆರಿಗೆ ಸಹಜವಾಗಿಯೇ ಆಗುವುದರಿಂದ ಸಿಸೇರಿಯನ್ ಮಾಡಬೇಕಾದ ಅಗತ್ಯ ಇಲ್ಲ” ಎಂದು ತಿಳಿಸಿದ್ದಾರೆ.
“ಪಂಚಗವ್ಯದ ಪ್ರತಿಯೊಂದು ಭಾಗವೂ ಕೂಡಾ ಮನುಕುಲಕ್ಕೆ ಅಮೂಲ್ಯವಾಗಿದೆ. ಸಗಣಿ ಸೇವನೆಯಿಂದ ದೇಹ ಹಾಗೂ ಹೃದಯ ಶುದ್ಧಿಯಾಗುತ್ತದೆ. ನಮ್ಮ ಆತ್ಮ ಶುದ್ದವಾಗುತ್ತದೆ. ಸಗಣಿ ನಮ್ಮ ದೇಹವನ್ನು ಹೊಕ್ಕ ಕೂಡಲೇ ದೇಹ ಶುದ್ಧವಾಗುತ್ತದೆ” ಎಂದಿದ್ದಾರೆ.





