July 6, 2026

ಪ್ರೀತಿಸುವಂತೆ ಪಾಗಲ್ ಪ್ರೇಮಿಯ ಕಾಟ: ದಂತ ವೈದ್ಯೆ ಆತ್ಮಹತ್ಯೆ

0
image_editor_output_image-1588296536-1675314272810.jpg

ಬೆಂಗಳೂರು: ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸಂಜಯ್ ನಗರದಲ್ಲಿ ನಡೆದಿದೆ.

ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ.

ಉತ್ತರಪ್ರದೇಶ ಲಕ್ನೋ ಮೂಲದ ಪ್ರಿಯಾಂನ್ಷಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆ ಆಗಿ ಕೆಲಸ ಮಾಡುತ್ತಿದ್ದರು.

ಅದೇ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮಿತ್ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಆದ್ರೆ ಪ್ರಿಯಾಂನ್ಷಿ ತ್ರಿಪಾಠಿ, ಪ್ರೀತಿಗೆ ಒಪ್ಪಿರಲಿಲ್ಲ.

ಇದರಿಂದ ಕೋಪಗೊಂಡ ವೈದ್ಯ ಸುಮಿತ್, ಪ್ರಿಯಾಂನ್ಷಿ ತ್ರಿಪಾಠಿಯ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ದ. ಆಕೆ ಸರಿಯಿಲ್ಲ, ಸಿಗರೆಟ್ ಸೇದುತ್ತಾಳೆ, ಡ್ರಿಂಗ್ಸ್ ಮಾಡ್ತಾಳೆ.. ಸಿಕ್ಕ ಸಿಕ್ಕವರ ಜೊತೆಗೆ ಓಡಾಡ್ತಾಳೆ ಅಂತಾ ಹೇಳಿಕೊಂಡು ಬರ್ತಿದ್ದ. ಇದರಿಂದ ಮನನೊಂದ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!