ಸಾಲ ಪಡೆಯದಿದ್ದರೂ ಸಾಲಗಾರರ ಕಿರುಕುಳ: ಮಹಿಳೆ ಆತ್ಮಹತ್ಯೆ
ಕೋಲಾರ: ಸ್ನೇಹಿತರಿಗೆ 1 ಲಕ್ಷ ರೂಪಾಯಿ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಲು ಹೋಗಿ ಸಾಲಗಾರರ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಪದ್ಮಾ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ನನ್ನ ಸಾವಿಗೆ ಸ್ನೇಹಿತರೇ ಕಾರಣ ಎಂದು ವೀಡಿಯೋ ಮಾಡಿಟ್ಟು ಮಹಿಳೆ ವಿಷ ಸೇವನೆ ಮಾಡಿದ್ದಾರೆ.
ಪದ್ಮಾ ಅವರು ದೇಶಿಹಳ್ಳಿಯ ವರಲಕ್ಷ್ಮಿ ಎಂಬವರಿಂದ ಸಾಲವನ್ನು ಪಡೆದು ತನ್ನ ಸ್ನೇಹಿತರಾದ ಅತ್ತಿಗಿರಿ ಗ್ರಾಮದ ಭಾಗ್ಯ ಮತ್ತು ಸಮ್ರತಿಗೆ ಸಾಲವಾಗಿ ಹಣ ಕೊಡಿಸಿದ್ದರು.
ಆದರೆ ಇತ್ತೀಚೆಗೆ ಸಾಲದ ಹಣ ಹಾಗೂ ಬಡ್ಡಿ ವಾಪಸ್ ಮಾಡದ ಹಿನ್ನೆಲೆ ಕಿರುಕುಳ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಪದ್ಮಾ ಸಾವಿನ ದಾರಿ ಹಿಡಿದಿದ್ದಾರೆ.




