February 3, 2026

ತಮಿಳುನಾಡು ರಾಜ್ಯಪಾಲರನ ನಿಂದನೆ:
ಡಿಎಂಕೆ ಕಾರ್ಯಕರ್ತ ಪಕ್ಷದಿಂದ ಅಮಾನತು

0
dmk.png

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕುರಿತು ದ್ರಾವಿಡ ಮುನ್ನೇತ್ರ ಕಳಗಂ(DMK) ನಾಯಕ ಶಿವಾಜಿ ಕೃಷ್ಣಮೂರ್ತಿ ಮಾಡಿರುವ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿದೆ. ಅವರ ನಿಂದನೆಯ ಮಾತುಗಳ ವಿರುದ್ಧ ಬಿಜೆಪಿ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೆಲವು ದಿನಗಳ ಹಿಂದೆ ರಾಜ್ಯಪಾಲ ಆರ್.ಎನ್.ರವಿ ವಿಧಾನಸಭೆ ಅಧಿವೇಶನದ ಉದ್ಘಾಟನಾ ಭಾಷಣದಲ್ಲಿ ಸರ್ಕಾರ ನೀಡಿದ ಸಂಪೂರ್ಣ ಭಾಷಣವನ್ನು ಓದಲಿಲ್ಲ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಅಂಬೇಡ್ಕರ್, ಪೆರಿಯಾರ್, ಅಣ್ಣಾದೊರೈ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಅದಲ್ಲದೇ, ತಮಿಳುನಾಡಿನ ಹೆಸರನ್ನು ಉದ್ದೇಶಪೂರ್ವಕವಾಗಿ ತಮಿಳಗಂ ಎಂದು ನಮೂದಿಸಲಾಗಿದೆ. ಈ ವೇಳೆ, ಸದನದಲ್ಲಿಯೇ ರಾಜ್ಯಪಾಲ ರವಿ ವಿರುದ್ಧ ಮುಖ್ಯಮಂತ್ರಿ ಸ್ಟಾಲಿನ್‌ ನಿರ್ಣಯ ಅಂಗೀಕರಿಸಿದರು.

ಇದಾದ ಬೆನ್ನಲ್ಲೇ‌ ತಮಿಳುನಾಡಿನಲ್ಲಿ ಈ ವ್ಯಕ್ತಿ ಭಾರತಕ್ಕೆ ಸಂವಿಧಾನ ನೀಡಿದ ನನ್ನ ಪೂರ್ವಜ ಅಂಬೇಡ್ಕರ್ ಅವರ ಹೆಸರನ್ನು ಹೇಳಲು ನಿರಾಕರಿಸಿದರೆ, ಅವರನ್ನು ಚಪ್ಪಲಿಯಿಂದ ಹೊಡೆಯಲು ನನಗೆ ಹಕ್ಕಿದೆಯೇ ಅಥವಾ ಇಲ್ಲವೇ?. ನೀವು ಅವರ ಹೆಸರಿನಲ್ಲಿ ಪ್ರಮಾಣ ಮಾಡಲಿಲ್ಲ. ಸಂವಿಧಾನವನ್ನು ಬರೆದವರು ಅಂಬೇಡ್ಕರ್ ಅಲ್ಲವೇ? ಅವರ ಹೆಸರು ಹೇಳದಿದ್ದರೆ ಕಾಶ್ಮೀರಕ್ಕೆ ಹೋಗಿ, ನಾವೇ ಉಗ್ರರನ್ನು ಕಳುಹಿಸುತ್ತೇವೆ, ಅವರನ್ನು ಗುಂಡಿಕ್ಕಿ ಕೊಲ್ಲಲಿ’ ಎಂದು ಶಿವಾಜಿ ಕೃಷ್ಣಮೂರ್ತಿ ಹೇಳಿದ್ದರು.

ಈ ರೀತಿಯ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ರಾಮಕೃಷ್ಣನ್ ಅವರನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!