ನಿತ್ಯಾನಂದನ ವಶದಲ್ಲಿ ಇರುವ ಬಾಲಕಿಯರನ್ನು ಹಿಂದೆ ತರುವಲ್ಲಿ ವೈಪಲ್ಯ:
ಕೇಂದ್ರ ಸರಕಾರಕ್ಕೆ ಗುಜರಾತ್ ಹೈಕೋರ್ಟ್ ಛೀಮಾರಿ
ಗುಜರಾತ್: ಕೇಂದ್ರ ಗೃಹ ಸಚಿವಾಲಯ ಮತ್ತು ಇತರ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಇಬ್ಬರು ಹುಡುಗಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಹೇಳುವ ಮೂಲಕ ಗೃಹ ಸಚಿವಾಲಯಕ್ಕೆ ಛೀಮಾರಿ ಹಾಕಿದೆ.
ಇಬ್ಬರೂ ಬಾಲಕಿಯರನ್ನು ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿದೇಶದಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವ ಬಗ್ಗೆ ಕೋರ್ಟ್ ಕಿಡಿಕಾರಿದೆ. 2019 ರ ನವೆಂಬರ್‌ನಲ್ಲಿ ಇಬ್ಬರು ಬಾಲಕಿಯರ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಹೈಕೋರ್ಟ್‌ಗೆ ತೆರಳಿದ್ದರೂ, ಅಧಿಕಾರಿಗಳು ಹುಡುಗಿಯರನ್ನು ಮರಳಿ ಕರೆತರಲು ಅಥವಾ ಸಂಪರ್ಕ ಸಾಧಿಸಲು ಸ್ವಲ್ಪವೂ ಕೆಲಸ ಮಾಡಿದ್ದ ಎಂದು ನ್ಯಾಯಮೂರ್ತಿಗಳಾದ ಎನ್‌ವಿ ಅಂಜಾರಿಯಾ ಮತ್ತು ನಿರಾಲ್ ಆರ್ ಮೆಹ್ತಾ ಅವರ ವಿಭಾಗೀಯ ಪೀಠವು ಗಮನಿಸಿದೆ. ಇಬ್ಬರೂ ಬಾಲಕಿಯರನ್ನು ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ.
“ಹೇಬಿಯಸ್ ಕಾರ್ಪಸ್ ಅರ್ಜಿಯ ಪ್ರಕ್ರಿಯೆಯು ಹಲವಾರು ಆದೇಶಗಳನ್ನು ನೀಡಾಗಿದೆ. ಸಾಕಷ್ಟು ಸಮಯದ ಬಳಿಕವೂ ಈಗಲೂ ಇದೇ ಪ್ರಕರಣ ಮತ್ತೆ ವಿಚಾರಣೆಗೆ ಬಂದಿದೆ. ಈವರೆಗೂ ನೀಡಿರುವ ಆದೇಶದಿಂದ ಯಾವುದೇ ಫಲವಾಗಿಲ್ಲ. ಇನ್ನು ಈ ಅರ್ಜಿಯ ವಿಚಾರವಾಗಿ ನಡೆದ ಪ್ರಕ್ರಿಯೆಯನ್ನು ಸ್ವಾಗತಾರ್ಹ ಎಂದು ಹೇಳಲು ಸಾಧ್ಯವಿಲ್ಲ’ ಎಂದು ವಿಭಾಗೀಯ ಪೀಠ ಹೇಳಿದೆ. ನವೆಂಬರ್ 12 ರಂದು ಪೀಠವು ಈ ಆದೇಶವನ್ನು ಹೊರಡಿಸಿದೆ.
2019ರಲ್ಲಿ ಭಾರತ ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತ್ತು ಹಾಗೂ ಹೊಸ ಅರ್ಜಿಯನ್ನು ತಿರಸ್ಕರಿಸಿತ್ತು. ಆತ ಮಕ್ಕಳನ್ನು ಅಪಹರಿಸಿದ್ದಾನೆ ಹಾಗೂ ಅವರನ್ನು ತನ್ನ ಆಶ್ರಮಕ್ಕೆ ಹಣ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ನಿತ್ಯಾನಂದ ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪ ”ಕೈಲಾಸ” ಎಂದು ಕರೆಯಲಾಗುಗುವ ಸ್ವತಂತ್ರ ದೇಶವನ್ನು ಖರೀದಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ




