ಕಾಸರಗೋಡು: ರಸ್ತೆ ಬದಿ ನಿಲುಗಡೆಗೊಳಿಸಿದ್ದ ಲಾರಿಗೆ ಕಾರು ಢಿಕ್ಕಿ: ಓರ್ವ ಮೃತ್ಯು, ಮೂವರಿಗೆ ಗಾಯ
ಕಾಸರಗೋಡು: ಕಾಸರಗೋಡು ನಗರದಲ್ಲಿ ರಸ್ತೆ ಬದಿ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಇಂದು ನಡೆದಿದೆ.
ಚೆಂಗಳದ ಸಂಶುದ್ದೀನ್ ಅವರ ಪುತ್ರ ಮುಹಮ್ಮದ್ ಸಾಹಿಲ್ (21) ಮೃತ ಪಟ್ಟವರು.
ನಗರದ ಹಳೆ ಬಸ್ಸು ನಿಲ್ದಾಣ ಪರಿಸರದಲ್ಲಿ ಈ ಅಪಘಾತ ನಡೆದಿದೆ ಅಣಂಗೂರು ಕಡೆಯಿಂದ ಮೂವರು ಸ್ನೇಹಿತರ ಜೊತೆ ಬರುತ್ತಿದ್ದಾಗ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಸಾಹಿಲ್ ಸ್ಥಳದಲ್ಲೇ ಮೃತ ಪಟ್ಟರೆ ಗಂಭೀರ ಗಾಯಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ನಜ್ಜು ಗುಜ್ಜಾಗಿದೆ.
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




