February 3, 2026

ವಿಧಾನಸೌಧದಲ್ಲಿ ವಶಪಡಿಸಿಕೊಂಡ ₹10 ಲಕ್ಷಕ್ಕೂ ನನಗೂ ಸಂಬಂಧವಿಲ್ಲ: ಸಿ.ಸಿ. ಪಾಟೀಲ

0
image_editor_output_image1115732940-1672995913527.jpg

ಬೆಂಗಳೂರು: ‘ವಿಧಾನಸೌಧದ ಪೂರ್ವ ದ್ವಾರದ ಬಳಿ ಪೊಲೀಸರು ವಶಪಡಿಸಿಕೊಂಡಿರುವ ಹಣಕ್ಕೂ ನನಗೂ ಸಂಬಂಧವಿಲ್ಲ. ವೀರೋಧ ಪಕ್ಷಗಳ ನಾಯಕರು ಚುನಾವಣೆ ಕಾರಣಕ್ಕಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹10 ಲಕ್ಷ ನಗದು ತಂದಿದ್ದ ಅಧಿಕಾರಿ ಹುಚ್ಚನಿದ್ದಾನೆ. ಆದರೂ, ಬ್ಯಾಗ್ ನಲ್ಲಿ ನಗದು ಇದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾನೆ. ಹಣ ಯಾರಿಗೆ ಸೇರಿದ್ದು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ತ‌ನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ’ ಎಂದರು.

ವಿಧಾನಸೌಧದಲ್ಲಿ ವಶಪಡಿಸಿಕೊಂಡ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸಿ.ಸಿ. ಪಾಟೀಲ ತಿಳಿಸಿದ್ದಾರೆ‌

‘ಹಣ ತಂದಿದ್ದ ಅಧಿಕಾರಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ವಿಚಾರಣೆ ನಡೆಯುತ್ತಿದೆ. ದುಡ್ಡು ಕೊಡಲು ವಿಧಾನಸೌಧಕ್ಕೆ ಏಕೆ ಬರಬೇಕಿತ್ತು? ಬೇರೆ ಕಡೆಯೂ ಕೊಡಬಹುದಿತ್ತಲ್ಲವೆ’ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!