June 27, 2026

ರಸ್ತೆ ಬದಿಯಲ್ಲಿದ್ದ 7 ಕಾರುಗಳಿಗೆ ಢಿಕ್ಕಿ ಹೊಡೆದ ಟಿಪ್ಪರ್ ಲಾರಿ

0
image_editor_output_image348279453-1672995434156.jpg

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಬಳಿ ಟಿಪ್ಪರ್ ಲಾರಿ 7 ಕಾರುಗಳಿಗೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಬಿಎಂಡಬ್ಲ್ಯೂ, ಸ್ಯಾಂಟ್ರೋ, ಎಟಿಯೋಸ್ ಲಿವಾ, ಸ್ವಿಫ್ಟ್, ಇಂಡಿಕಾ, ಥಾರ್ ಕಾರುಗಳಿಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆಗೆ ಬರ್ತಿದ್ದ ಟಿಪ್ಪರ್ ಲಾರಿ ಸಿಗ್ನಲ್‍ನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಒಂದಕ್ಕೊಂದು ಕಾರುಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿಯಾಗಿ 7 ಕಾರುಗಳ ಮುಂಭಾಗ ಹಿಂಭಾಗ ಜಖಂಗೊಂಡಿವೆ.

Leave a Reply

Your email address will not be published. Required fields are marked *

error: Content is protected !!