March 26, 2026

ನ್ಯಾಷನಲ್‌ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ‌ ಕರೆ: ಪೊಲೀಸರ ತಪಾಸಣೆ

0
image_editor_output_image558706587-1672998090940.jpg

ಬೆಂಗಳೂರು: ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ‌ ನ್ಯಾಷನಲ್‌ ಪಬ್ಲಿಕ್ ಶಾಲೆಗೆ (ಎನ್‌ಪಿಎಸ್) ಬಾಂಬ್ ಬೆದರಿಕೆ‌ ಬಂದಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

‘ಶಾಲೆಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ಆಡಳಿತ ಮಂಡಳಿಯವರು, ಬಸವೇಶ್ವರ ನಗರ ಠಾಣೆಗೆ ಮಾಹಿತಿ‌ ನೀಡಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಶಾಲೆ ತರಗತಿ ಕೊಠಡಿಗಳು ಹಾಗೂ‌ ಮೈದಾನ ಸೇರಿದಂತೆ ಎಲ್ಲ‌ ಕಡೆಯೂ ಹುಡುಕಾಟ‌ ನಡೆಸಲಾಗುತ್ತಿದೆ. ಶ್ವಾನ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.’

‘ಇದೊಂದು‌ ಹುಸಿ ಬೆದರಿಕೆ ಎಂಬುದು‌ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆಡಳಿತ ಮಂಡಳಿ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ನಿಂಬರಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!