February 3, 2026

ವಿಟ್ಲ: ಪೆರುವಾಯಿ ಮುಚ್ಚಿರಪದವು ಚರ್ಚ್ ನಲ್ಲಿ ಪಾಲನ ಮಂಡಳಿಯ ಪದಾಧಿಕಾರಿಗಳ ಆಯ್ಕೆ

0
IMG-20230106-WA0040.jpg

ವಿಟ್ಲ: ಸಮೀಪದ ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆ ದೇವಾಲಯದಲ್ಲಿ ಚರ್ಚ್ ಪಾಲನ ಮಂಡಳಿಯ ಪದಾಧಿಕಾರಿಗಳ ಪದಗ್ರಹದ ಸಮಾರಂಭ ಚರ್ಚ್ ನಲ್ಲಿ ನೆರವೇರಿತು.

ನೂತನ ಉಪಾಧ್ಯಕ್ಷರಾಗಿ ಡೆನಿಸ್ ಮೊಂತೇರೋ, ಕಾರ್ಯದರ್ಶಿಯಾಗಿ ವೈಲೆಟ್ ಕೊವೆಲ್ಲೊ ಆಯ್ಕೆಯಾಗಿದ್ದು, ಪ್ರಮಾಣ ವಚನ ಸ್ವೀಕರಿಸಿದರು. ಚರ್ಚ್ ನ ಧರ್ಮಗುರು ಫಾ. ವಿಶಾಲ್ ಮೋನಿಸ್ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಚರ್ಚ್ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಆರ್ಥಿಕ ಹಣಕಾಸು ಸಮಿತಿಯ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪೆರುವಾಯಿ ಕ್ಯಾತೋಲಿಕ್ ಸಭಾ ಘಟಕ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ವಿಲ್ಫ್ರೆಡ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು ಹಿಂದೆ ಚರ್ಚಿನಲ್ಲಿ ಸೇವೆ ಸಲ್ಲಿಸಿದ ವಿನ್ಸೆಂಟ್ ಡಿಸೋಜಾ ಹಾಗೂ ವಿಲ್ಲೆಂ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಫಾದರ್ ವಿಶಾಲ್ ಮೋನಿಸ್ , ಕಥೋಲಿಕ್ ಘಟಕದ ಅಧ್ಯಕ್ಷ ರಾಲ್ಫ್ ಸೋಜ, ಕಾರ್ಯದರ್ಶಿ ದೀಕ್ಷಿತ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!