ರಾತ್ರಿಯ ವೇಳೆಯು ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್
ನವದೆಹಲಿ: ಸರ್ಕಾರಿ ಪ್ರಕ್ರಿಯೆಗಳಿಂದ ವಿಳಂಬವಾಗುತ್ತಿದ್ದ ಮರಣೋತ್ತರ ಪರೀಕ್ಷೆ (Post-Mortem ) ಪ್ರೋಟೋಕಾಲ್ ಬದಲಿಸಲಾಗಿದೆ. ಇಷ್ಟು ದಿನ ಸೂರ್ಯನ ಬೆಳಕಿನ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಬೇಕು ಅನ್ನೋ ಸರ್ಕಾರಿ ನಿಯಮನ್ನು ಇದೀಗ ಬದಲಿಸಲಾಗಿದೆ. ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಆರೋಗ್ಯ ಇಲಾಖೆ ಸ್ವೀಕರಿಸಿದ ಹಲವು ಸಲಹೆ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಇದೀಗ ಪೋಸ್ಟ್ ಮಾರ್ಟಮ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಸೂರ್ಯಾಸ್ತಮಾನದ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಲು ಅನುವು ಮಾಡಿಕೊಡಲಾಗಿದೆ.
ಆದರೆ ಸರಿಯಾದ ಸಲಕರಣೆ, ಸೌಲಭ್ಯ ಇರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ನೂತನ ನಿಯಮದಲ್ಲಿ ಹೇಳಿದೆ. ಇದರಿಂದ ದುಃಖಪ್ತ ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಮೃತದೇಹ ಸ್ವೀಕರಿಸಲು ಸಾಧ್ಯವಾಗಲಿದೆ. ಇದರ ಜೊತೆಗೆ ಅಂಗಾಂಗ ದಾನ ಹಾಗೂ ಕಸಿ ಚಿಕಿತ್ಸೆಗೂ ಇದು ನೆರವಾಗಲಿದೆ. ಇಂದಿನಿಂದಲೇ ನೂತನ ನಿಯಮ ಜಾರಿಯಾಗುತ್ತಿದೆ.





