ಮುಂಬೈ: ಸ್ಯಾಮ್ಸಂಗ್ ಸೇವಾ ಕೇಂದ್ರದಲ್ಲಿ ಬೆಂಕಿ ಅವಘಡ
ಮುಂಬೈ: ಮುಂಬೈನ ಸ್ಯಾಮ್ಸಂಗ್ ಸೇವಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 10 ರಿಂದ 12 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಮತ್ತು ಸ್ಥಳೀಯ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮುಂಬೈ ಡಿಸಿಪಿ ಪ್ರಶಾಂತ್ ಕದಂ ತಿಳಿಸಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ ಎಂದು ಕದಂ ಹೇಳಿದ್ದಾರೆ.”ಮುಂಬೈನ ಕಂಜುರ್ಮಾರ್ಗ್ ಪೂರ್ವದಲ್ಲಿರುವ ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. 10-12 ಅಗ್ನಿಶಾಮಕ ವಾಹನಗಳು ಇಲ್ಲಿವೆ. ಸ್ಥಳೀಯ ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅವರು ಹೇಳಿದರು. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.





